ಬಂದರು ಎಂಬ ಶಬ್ದವು ಸಾಮಾನ್ಯವಾಗಿ ಪೋರ್ಟ್ನೊಂದಿಗೆ ಪರ್ಯಾಯವಾಗಿ ಬಳಸಲ್ಪಡುತ್ತದೆ. ಇದು ನೌಕೆಗಳನ್ನು ಲೋಡ್ ಮಾಡಲು ಮತ್ತು ಇಳಿಸುವ ಮತ್ತು ಇದು ಮಾನವ ನಿರ್ಮಿತ ಸೌಲಭ್ಯವಾಗಿದೆ. ಭಾರತವು 7516.6 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಕರಾವಳಿಯನ್ನು ಹೊಂದಿದೆ, ಇದು ವಿಶ್ವದ ಅತಿದೊಡ್ಡ ಪರ್ಯಾಯ ದ್ವೀಪಗಳಲ್ಲಿ ಒಂದಾಗಿದೆ. ಹಡಗು ಸಾಗಣೆ ಸಚಿವಾಲಯ, ಭಾರತ ಸರಕಾರದ ಪ್ರಕಾರ, ಭಾರತದ ವ್ಯಾಪಾರದ ಸುಮಾರು 95 ಪ್ರತಿಶತದಷ್ಟು ಮತ್ತು ಮೌಲ್ಯದಿಂದ 68 ಪ್ರತಿಶತದಷ್ಟು ಸಮುದ್ರ ಸಾರಿಗೆ ಮೂಲಕ ಮಾಡಲಾಗುತ್ತದೆ. ಇದು 13 ಪ್ರಮುಖ ಬಂದರುಗಳು (12 ಸರ್ಕಾರಿ ಸ್ವಾಮ್ಯದ ಮತ್ತು ಒಂದು ಖಾಸಗಿ) ಮತ್ತು 187 ಅಧಿಸೂಚಿತ ಸಣ್ಣ ಮತ್ತು ಮಧ್ಯಂತರ ಬಂದರುಗಳಿಂದ ಸೇವೆ ಸಲ್ಲಿಸುತ್ತದೆ. 2010 ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲ್ಪಟ್ಟ ಪೋರ್ಟ್ ಬ್ಲೇರ್ ಅನ್ನು ಇತ್ತೀಚೆಗೆ ಅದರ ಸ್ಥಾನಮಾನದಿಂದ ತೆಗೆದುಹಾಕಲಾಯಿತು. ಒಟ್ಟು 200 ಪ್ರಮುಖ ಮತ್ತು ಪ್ರಮುಖವಲ್ಲದ ಬಂದರುಗಳು ಈ ಕೆಳಗಿನ ರಾಜ್ಯಗಳಲ್ಲಿವೆ: ಮಹಾರಾಷ್ಟ್ರ (53); ಗುಜರಾತ್ (40); ಕೇರಳ (20); ತಮಿಳುನಾಡು (15); ಕರ್ನಾಟಕ(10) ಮತ್ತು ಇತರರು (63). == ಪಶ್ಚಿಮ ತೀರದ ಬಂದರುಗಳು == === ಕಾಂಡ್ಲಾ === ಇದು ಗುಜಾರಾತಿನ ಕಛ್ ಖಾರಿಯ ಶಿರೋಭಾಗದಲ್ಲಿದೆ.ಇದನ್ನು ದೀನ್ ದಯಾಳ್ ಉಪಾಧ್ಯಾಯ ಬಂದರು ಎನ್ನುವರು.ಇದು ಸ್ವತಂತ್ರ ಭಾರತದ ಮೊದಲ ಬಂದರು. === ಮುಂಬಯಿ === ಇದು ವಿಶಾಲ ಸ್ಥಳಾವಕಾಶವುಳ್ಳ, ಹಡಗು ತಂಗುವ ಬಂದರು. ಇದು ಮಹಾರಾಷ್ಟ್ರದಲ್ಲಿದ್ದು, ಇದನ್ನು "ಭಾರತದ ಹೆಬ್ಬಾಗಿಲು" ಎಂದು ಕರೆಯುತ್ತಾರೆ. === ಜವಹರಲಾಲ್ ನೆಹರು ಬಂದರು === ಹಿಂದೆ ಇದನ್ನು "ನವಾಶೇವ ಬಂದರು" ಎಂದು ಕರೆಯುತ್ತಿದ್ದರು.ಇದು ಮುಂಬಯಿ ನಗರದಿಂದ ೧೦ ಕಿ.ಮೀ.ದೂರದಲ್ಲಿರುವ ಎಲಿಫೆಂಟಾ ಗುಹೆಗಳಿಗೆ ಸಮೀಪದಲ್ಲಿದೆ. ಮುಂಬಯಿ ಬಂದರಿನ ಒತ್ತಡವನ್ನು ಕುಗ್ಗಿಸಲು ಈ ಬಂದರು ನಿರ್ಮಾಣಗೊಂಡಿದೆ. === ಮರ್ಮಗೋವ === ಇದು ಗೋವಾದ ಜುವಾರಿ ನದಿಯ ಹತ್ತಿರದಲ್ಲಿದೆ.ಅತೀ ಹೆಚ್ಚು ಕಬ್ಬಿಣ ರಪ್ತು ಮಾಡುವ ಬಂದರು === ನವಮಂಗಳೂರು === ಇದನ್ನು "ಕರ್ನಾಟಕದ ಹೆಬ್ಬಾಗಿಲು" ಎಂದು ಕರೆಯಲಾಗಿದೆ. === ಕೊಚ್ಚಿ === ಇದು ಕೇರಳ ತೀರದಲ್ಲಿದೆ. ಇದನ್ನು 'ಅರಬ್ಬೀ ಸಮುದ್ರದ ರಾಣಿ'ಎಂದು ಕರೆಯಳಗಿದೆ. == ಪೂರ್ವ ತೀರದ ಬಂದರುಗಳು == === ತುತುಕುಡಿ === ತಮಿಳುನಾಡಿನ ಆಗ್ನೇಯ ಭಾಗದಲ್ಲಿದೆ. === ಚೆನ್ನೈ === ಇದು ತಮಿಳುನಾಡಿನಲ್ಲಿರುವ ಹಳೆಯ ಬಂದರು. ಇದೊಂದು ಕೃತಕ ರೇವುವುಳ್ಳದ್ದು. === ಎನ್ನೋರ್ === ಚೆನ್ನೈ ಬಂದರಿನ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಚೆನ್ನೈ ಬಂದರಿನಿಂದ ಉತ್ತರ ಭಾಗದಲ್ಲಿದೆ.ಇತ್ತೀಚಿಗೆ ಇದಕ್ಕೆ ಕಾಮರಾಜ ಎಂದು ನಾಮಕರಣ ಮಾಡಿದ್ದಾರೆ. === ಪಾರಾದೀಪ್ === ಒಡಿಸ್ಸಾದ ಮಹಾನದಿ ಮುಖ ಭಾಗದಲ್ಲಿರುವ ಬಂದರು. === ವಿಶಾಖಪಟ್ಟಣ === ಇದು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿರುವ ಬಂದರು. ಭಾರತದ ಆಳವಾದ ಬಂದರು === ಹಾಲ್ಡಿಯ === ಇದು ಹೂಗ್ಲಿ ಮತ್ತು ಹಾಲ್ಡಿ ನದಿಗಳ ಸಂಗಮ ಸ್ಥಳದಲ್ಲಿ ನೆಲೆಸಿದೆ. ಕೊಲ್ಕತ್ತ ಬಂದರಿಗೆ ಪ್ರವೇಶಿಸಲಾಗದ ಕೆಲ ಬಂದರುಗಳು ಈ ಬಂದರಿಗೆ ಪ್ರವೇಶಿಸುತ್ತದೆ ಇದು ಪಶ್ಚಿಮ ಬಂಗಳದಲ್ಲಿ ಕ೦ಡು ಬರುತ್ತದೆ. === ಕೊಲ್ಕತ್ತ === ಹೂಗ್ಲಿ ನದಿಯ ಎಡ ದಂಡೆಯಲ್ಲಿದ್ದು, ಭಾರತದ ನದಿದಂಡೆಯ ಬಂದರಾಗಿದೆ. ಭಾರತದ ಎರಡನೇ ದೊಡ್ಡ ಬಂದರು. ಸಮುದ್ರಯಾನದಲ್ಲಿ ನಡೆಯುವ ವ್ಯಾಪಾರ ಕಾರ್ಯನಿರ್ವಹಿಸುವ ಆಗ್ನೇಯ ಏಷ್ಯಾದ ದೊಡ್ಡ ಬಂದರು === ಪೋರ್ಟ್ ಬ್ಲೇರ್ === ಇದು ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದಾದ ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿದೆ. == ಭಾರತದ ಪ್ರಮುಖ ಬಂದರು == ಕೆಳಗಿನ ಕೋಷ್ಟಕವು ಭಾರತದ ಪ್ರಮುಖ ಬಂದರುಗಳ ಬಗ್ಗೆ ವಿವರವಾದ ಡೇಟಾವನ್ನು ನೀಡುತ್ತದೆ (ಮೂಲ: ಭಾರತೀಯ ಬಂದರುಗಳ ಸಂಘ) == ಉಲ್ಲೇಖಗಳು ==